ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್ಗೆ ಇನ್ನು ಕೇವಲ ಎರಡು ವಾರಗಳು ಬಾಕಿಯಿರುವಾಗಲೇ ಕೋವಿಡ್ ಕಾರಣದಿಂದಾಗಿ ಜಪಾನ್ನ ಪಿಎಂ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಒಲಿಂಪಿಕ್ಸ್ ನಡೆಯುವಾಗ ಜಪಾನ್ನ ಕ್ರೀಡಾ ಅಭಿಮಾನಿಗಳಿಗೆ ಸ್ಟೇಡಿಯಂಗೆ ಪ್ರವೇಶ ನೀಡಲಾಗುತ್ತದೆ ಎಂದು ಮೊದಲು ಹೇಳಲಾಗಿತ್ತು. ಇದೀಗ ಹೆಚ್ಚಿನ ಎಲ್ಲ ಸ್ಪರ್ಧೆಗಳಿಗೂ, ಅಭಿಮಾನಿಗಳಿಗೂ ಪ್ರವೇಶವನ್ನೂ ನಿಷೇಧಿಸುವ ಸಾಧ್ಯತೆಯಿದೆ.
‘ಟೋಕಿಯೋವನ್ನು ನಾವು ತುರ್ತು ಪರಿಸ್ಥಿತಿಯ ರಾಜ್ಯವಾಗಿ ಘೋಷಿಸಿದ್ದೇವೆ. ಈ ತುರ್ತು ಪರಿಸ್ಥಿತಿಯ ಅವಧಿ ಆಗಸ್ಟ್ 22ರ ವರೆಗೆ ಇರಲಿದೆ” ಎಂದು ಜಪಾನ್ ಪ್ರಧಾನ ಮಂತ್ರಿ ಯೋಶಿಹಿಡೆ ಸುಗಾ ಸಭೆಯಲ್ಲಿ ತಿಳಿಸಿದ್ದಾರೆ.
ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋದಲ್ಲಿ ಒಲಿಂಪಿಕ್ಸ್ ನಡೆಯಲಿದ್ದು ತುರ್ತು ಪರಿಸ್ಥಿತಿ ಘೋಷಣೆಯಾಗಿರುವುದರಿಂದ ಒಲಿಂಪಿಕ್ಸ್ ಆರಂಭದಿಂದ ಅಂತ್ಯದ ವರೆಗೂ ಅಭಿಮಾನಿಗಳಿಗೆ ಸ್ಟೇಡಿಯಂ ಪ್ರವೇಶ ನಿಷೇಧಿಸುವ ಸಾಧ್ಯತೆಯಿದೆ.
Advertisement. Scroll to continue reading.

In this article:Diksoochi news, diksoochi udupi, diksoochitv, Japan, tokyo olympics

Click to comment