Connect with us

Hi, what are you looking for?

Diksoochi News

ಕರಾವಳಿ

ಕಟಪಾಡಿ : ಬಸ್ಸಿನ ಚಕ್ರದಡಿ ಸಿಲುಕಿದ ಬೈಕ್; ಸವಾರ ಮೃತ್ಯು

0

ಕಾಪು: ಬಸ್ಸೊಂದು ಬೈಕಿಗೆ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಕಟಪಾಡಿ ಜಂಕ್ಷನ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ. ಕಟಪಾಡಿ ಅಚ್ಚಡ ವಿದ್ಯಾನಗರ ನಿವಾಸಿ ಯಶೋಧರ ಆಚಾರ್ಯ (50) ಮೃತಪಟ್ಟವರು.

ಕಟಪಾಡಿಯ ಗ್ಲಾಸ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು,ಬೈಕ್ ಸವಾರಿ ಮಾಡಿಕೊಂಡು ಶಿರ್ವಾ ರಸ್ತೆಯಿಂದ ಹೊರಟು ಹೆದ್ದಾರಿ ದಾಟುತ್ತಿದ್ದಾಗ ಮಂಗಳೂರು ಕಡೆಯಿಂದ ಅತೀ ವೇಗವಾಗಿ ಬಂದ ಬಸ್ಸು ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಚಕ್ರದಡಿ ಸಿಲುಕಿ ಹೆದ್ದಾರಿಯಲ್ಲಿ 50 ಅಡಿ ದೂರಕ್ಕೆ ಎಳೆದೊಯ್ದಿದೆ. ಅಪಘಾತದ ತೀವ್ರ ತೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!