Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಬಾರಕೂರು ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಬಾರಕೂರು ರೋಟರಿ ಕ್ಲಬ್ ಪದಗ್ರಹಣ ಸಮಾರಂಭ ರೋಟರಿ ಸಭಾ ಭವನದಲ್ಲಿ ಭಾನುವಾರ ಜರುಗಿತು. ನಿಕಟ ಪೂರ್ವ ಅಧ್ಯಕ್ಷ ವಾಸುದೇವ ಶೆಟ್ಟಿ ಹಾಗೂ ಕಾರ್ಯದರ್ಶಿ ಸುದರ್ಶನ ಉಡುಪ ಇವರಿಂದ 2021- 22 ರ ನೂತನ ಅಧ್ಯಕ್ಷ ಚರಣ ಶೆಟ್ಟಿ ಮತ್ತು ಪ್ರಕಾಶ್ ತಂತ್ರಿ ಅವರಿಗೆ ಪದಗ್ರಹಣ ನಡೆಯಿತು. ಅಧಿಕಾರಿ ರೋಟರಿ ಡಾ. ಎಚ್. ಜೆ. ಗೌರಿ ಪದಪ್ರಧಾನ ಮಾಡಿದರು.
ಬಳಿಕ ಮಾತನಾಡಿದ ಅವರು, ರೋಟರಿ ಸಂಸ್ಥೆಯಲ್ಲಿ ಪುರುಷರಂತೆ ಮಹಿಳೆಯರು ಕೂಡಾ ಹೆಚ್ಚು ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ಇರಬೇಕು. ರೋಟರಿಯಲ್ಲಿ ಸಮಾಜ ಸೇವೆಯೊಂದಿಗೆ ಸಾರ್ವಜನಿಕ ಬದುಕಿನ ಎಲ್ಲಾ ಅನುಭವಗಳು ಸಿಗುತ್ತದೆ ಎಂದರು.


ಇದೇ ಸಂದರ್ಭದಲ್ಲಿ ಹೊಸ ಸದಸ್ಯರನ್ನು ಸೆರ್ಪಡೆ ಗೊಳಿಸಲಾಯಿತು. ಪರಿಸರದ ಆಶಾ ಕಾರ್ಯಕರ್ತೆಯರನ್ನು, ಮೆಸ್ಕಾಂ ಸಿಬ್ಬಂದಿಗಳನ್ನು ಮತ್ತು ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಪಧ್ಮನಾಭ ಕಾಂಚನ್, ದೇವದಾಸ್ ಶೆಟ್ಟಿಗಾರ್, ವಿಜಯ ಕುಮಾರ್ ಶೆಟ್ಟಿ, ಆಲ್ವಿನ್ ಅಂದ್ರಾದೆ ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!