Connect with us

Hi, what are you looking for?

Diksoochi News

ರಾಜ್ಯ

ಕಲಬುರ್ಗಿ : ಸರಣಿ ಅಪಘಾತ; ಅಣ್ಣ – ತಂಗಿ ಸಾವು; ಐದು ಮಂದಿಗೆ ಗಾಯ

0

ಕಲಬುರ್ಗಿ : ಶರಣಸಿರಸಗಿ ಗ್ರಾಮದ ಬಳಿ ಸೋಮವಾರದಂದು ಟೆಂಪೊ, ಬೈಕ್, ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿದ್ದ ಅಣ್ಣ, ತಂಗಿ ಮೃತಪಟ್ಟಿದ್ದಾರೆ.
ಅಫಜಲಪುರ ತಾಲ್ಲೂಕಿನ ಶಿವೂರು ಗ್ರಾಮದ ಅಜಯ್ ರೋಡಗಿ (29), ಪ್ರೇಮಾ ಪ್ರವೀಣ (27) ಮೃತಪಟ್ಟ ದುರ್ದೈವಿಗಳು. ಈ ಘಟನೆಯಲ್ಲಿ ಐದು ಮಂದಿಗೆ ಗಂಭೀರ ಗಾಯಗಳಾಗಿವೆ. ಟೆಂಪೋ ಚಾಲಕ ಮೊದಲು ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಬೈಕ್ ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ನಿಯಂತ್ರಣ ತಪ್ಪಿ ಟೆಂಪೋ ಚಾಲಕ ಕಾರಿಗೂ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ವಾಹನಗಳು ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ಉರುಳಿ ಬಿದ್ದಿವೆ.

ಗಾಯಗೊಂಡವರನ್ನು ಕಲಬುರ್ಗಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಲಬುರ್ಗಿಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!