ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಗಿಳಿಯಾರು ಗ್ರಾಮದ ಹರ್ತಟ್ಟು ಭಾಗದ ನೆರೆಪೀಡಿತ ಕೃಷಿ ಭೂಮಿ ವೀಕ್ಷಿಸಲು ಕೋಟ ಹೋಬಳಿ ಕಂದಾಯ ಅಧಿಕಾರಿ ರಾಜು ಬುಧವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನೀರು ಆವರಿಸಿಕೊಂಡ ಕೃಷಿ ಬಯಲು ಪ್ರದೇಶಗಳನ್ನು ಪರಿಶೀಲಿಸಿ, ಭಾಗಶಃ ಹಾನಿಗೊಂಡ ಕೃಷಿ ಭೂಮಿಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಅಲ್ಲದೇ ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಕೋಟ ಗ್ರಾಮ ಲೆಕ್ಕಿಗ ಚೆಲುವರಾಜು, ಕೋಟ ರೈತ ಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಗ್ರಾಮ ಸಹಾಯಕ ರಾಜು ಕುಂದರ್, ಕೃಷಿಕ ಗಿರೀಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು
Advertisement. Scroll to continue reading.