ಶಿವಮೊಗ್ಗ : ಹೊಸನಗರ ತಾಲೂಕಿನಾಧ್ಯಂತ ಕಳೆದ 24 ಗಂಟೆಯಲ್ಲೇ ರಾಜ್ಯದಲ್ಲೇ ಅತ್ಯಧಿಕ 210.2 ಮಿಲಿಮೀಟರ್ ದಾಖಲೆಯ ಮಳೆಯಾಗಿದೆ. ಈ ಕುರಿತಂತೆ ತಾಲೂಕು ಆಡಳಿತ ಮಾಹಿತಿ ಹಂಚಿಕೊಂಡಿ ದೆ. ವರಾಹಿ ಯೋಜನಾ ಪಾತ್ರದ ಮಾಣಿಯಲ್ಲಿ 194 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 155ಯಡೂರಿನಲ್ಲಿ 166 ಹಾಗೂ ಹುಲಿಕಲ್ 132 ಮಿಲಿಮೀಟರ್ ದಾಖಲೆಯ ಮಳೆಯಾಗಿದೆ.
ಶರಾವತಿ ಕಣಿವೆಯ ಯೋಜನಾ ಪ್ರದೇಶದಲ್ಲೂ ವ್ಯಾಪಕ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಲಿಂಗನಮಕ್ಕಿ ಡ್ಯಾಂಗೆ 47,808 ಕ್ಯೂಸೆಕ್ಸ್ ನೀರು ಹರಿದು ಬಂದಿದೆ. ಕಳೆದ 24 ಗಂಟೆಯಲ್ಲಿ ದಾಖಲೆಯ ಮಳೆಯ ಪ್ರಭಾವದಿಂದಾಗಿ ಡ್ಯಾಂನಲ್ಲಿ 2 ಅಡಿ ನೀರು ಹೆಚ್ಚಳವಾಗಿದೆ. 1819 ಅಡಿ ಗರಿಷ್ಠ ಮಟ್ಟ ಹೊಂದಿರುವ ಲಿಂಗನಮಕ್ಕಿ ಡ್ಯಾಂನಲ್ಲಿ ಈಗ 1788.10 ಅಡಿ ನೀರು ಸಂಗ್ರಹವಾಗಿದೆ.
Advertisement. Scroll to continue reading.