ಉಡುಪಿ : ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯದೊಂದಿಗೆ ಯುವವಾಹಿನಿಯು ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೇ, ಅನ್ನ, ಆಕ್ಷರ, ಆಸರೆ ಎಂಬ ಧ್ಯೇಯದೊಂದಿಗೆ ಬಡವರಿಗೆ, ನೊಂದವರಿಗೆ, ಸೂರು ಕಲ್ಪಿಸಿಕೊಡುವ ಯುವವಾಹಿನಿ ಉಡುಪಿ ಘಟಕದ ತಲೆಗೊಂದು ಸೂರು ಎಂಬ ಪರಿಕಲ್ಪನೆಯಡಿ ಇದು ಐದನೇ ಮನೆಯಾಗಿದೆ. ಇದು ಉಡುಪಿ ಘಟಕದ ಶ್ರೇಷ್ಠ ಕಾರ್ಯವಾಗಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಡಾ. ರಾಜರಾಮ್ ಕೆ.ಬಿ.ಹೇಳಿದರು.
ಅವರು ಉಡುಪಿ ಕಡೇಕರ್ ಲಯನ್ಸ್ ಕಾಲೊನಿಯಲ್ಲಿ ದಾನಿಗಳ ನೆರವಿನಿಂದ ನಡೆದ ಯುವವಾಹಿನಿ ಉಡುಪಿ ಘಟಕದ ತಲೆಗೊಂದು ಸೂರು ಯೋಜನೆಯ 5ನೇ ಮನೆ `ಶ್ರೀಗುರು ಅನುಗ್ರಹ’ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಮಾತನಾಡಿ, ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯದೊಂದಿಗೆ ಯುವವಾಹಿನಿ ಉಡುಪಿ ಘಟಕ ಹತ್ತು ಹಲವು ಉತ್ತಮ ಕಾರ್ಯಕ್ರಮಗಳನ್ನು ಮಾಡಿದೆ. ನಿಮ್ಮೊಂದಿಗೆ ನಾನಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ಜಗದೀಶ್ ಕುಮಾರ್, ಕಾರ್ಯಕ್ರಮ ಸಂಚಾಲಕ ರಘುನಾಥ್ ಮಾಬಿಯಾನ್, ಕಾರ್ಯದರ್ಶಿ ಮಾಲತಿ ಅಮೀನ್, ಮಹಿಳಾ ಸಂಚಾಲಕಿ ನವೀಶಾ ಮೊದಲಾದವರು ಉಪಸ್ಥಿತರಿದ್ದರು.



































