ಉಡುಪಿ : ದೈವ ಚಾಕ್ರಿ ವರ್ಗಕ್ಕೆ ಪ್ಯಾಕೇಜ್ ಘೋಷಿಸುವಂತೆ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ ಉಡುಪಿ ವತಿಯಿಂದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು. ಎರಡನೇ ಬಾರಿಯ ಕೋರೋನ ತುರ್ತು ಸಂದರ್ಭದಲ್ಲಿ ಸರ್ಕಾರದಿಂದ ದೈವ ಚಾಕ್ರಿ ವರ್ಗದವರಿಗೆ ಯಾವುದೇ ಪ್ಯಾಕೆಜ್ ಬರಲಿಲ್ಲ ಹಾಗೂ ಉಡುಪಿ ಮತ್ತು ಮಂಗಳೂರಿನಲ್ಲಿ ದೈವಸ್ಥಾನಗಳಲ್ಲಿ ನಡೆಯುವ ಮಾರಿಪೂಜೆ, ದರ್ಶನ ಸೇವೆ, ತಂಬಿಲ ಸೇವೆ ಮುಂತಾದ ಪೂಜಾ ಕಾರ್ಯಕ್ರಮಗಳಿಗೆ ಸರ್ಕಾರದ ಕಟ್ಟುನಿಟ್ಟಾದ 150 ಜನ ಸೀಮಿತಕ್ಕೆ ದೈವಾರಾಧನೆ ನಡೆಸಲು ಸರ್ಕಾರದಿಂದ ಅನುಮತಿ ಬರಲಿಲ್ಲ. ಇದರಿಂದ ದೈವ ಚಾಕ್ರಿ ಯವರು ತುಂಬ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಇದಕ್ಕೆ ಸೂಕ್ತವಾಗಿ ನಿಮ್ಮ ಮುಖಾಂತರ ವಿರೋಧ ಪಕ್ಷದ ವತಿಯಿಂದ ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿ ಎಂದು ಒಕ್ಕೂಟದ ಮನವಿ ಮಾಡಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಿಮ್ಮೆಲ್ಲಾ ಸಮಸ್ಯೆಯನ್ನು ಈ ದಿನ ಮುಖ್ಯಮಂತ್ರಿ ಹಾಗೂ ಇದಕ್ಕೆ ಸಂಬಂಧಪಟ್ಟ ಸಚಿವರೊಂದಿಗೆ ಮಾತಾಡುತ್ತೇನೆ. ನಿಮ್ಮ ಯಾವುದೇ ಸಮಸ್ಯೆಗೆ ನಿಮ್ಮೊಂದಿಗೆ ಬೆಂಬಲವಾಗಿ ನಾನಿರುತ್ತೇನೆ ಎಂದರು. ಈ ಒಂದು ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ರವಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಾಧಿಕಾರಿ ಹಾಗೂ ಬ್ರಹ್ಮವಾರ ಘಟಕ ಅಧ್ಯಕ್ಷ ಶ್ರೀಧರ್ ಪೂಜಾರಿ, ಜೊತೆ ಕಾರ್ಯದರ್ಶಿ ದಯೆಶಾ ಕೋಟ್ಯಾನ್, ನವೀನ್ ಕುಂಜಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

