ಪಡುಬಿದ್ರಿ: ಲಾಕ್ ಡೌನ್ ಮತ್ತು ಬಿರುಸು ಮಳೆಯ ಕಾರಣ ತತ್ತರಿಸಿದ ಬಡ ಕುಟುಂಬಗಳಿಗೆ ದಾನಿಗಳಾದ ಕಾಡಿಪಟ್ಣ ರತ್ನಾಕರ್ ಪುತ್ರನ್ ಮುಂಬಾಯಿ ಇವರ ವತಿಯಿಂದ ಸುಮಾರು 50 ಕುಟುಂಬಗಳಿಗೆ ಉಚಿತ ಅಕ್ಕಿ ವಿತರಣೆ ಮಾಡಲಾಯಿತು. ಇವರು ಪ್ರತಿ ವರ್ಷ ಮಳೆಗಾಲ ದ ಕಾರಣ ಸ್ಥಗಿತಗೊಳ್ಳುವ ಮೀನುಗಾರಿಕೆಯ ಸಂದರ್ಭ ಬಡ ಮೀನುಗಾರ ಕುಟುಂಬಗಳಿಗೆ ಅಕ್ಕಿ ಸಹಿತ ದಿನಸಿ ಸಾಮಾಗ್ರಿಗಳನ್ನು ವಿತರಿಸುತ್ತಿದ್ದಾರೆ.