ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್ ನ ರಸ್ತೆ ಈಗಾಗಲೇ ಹಲವು ಬಾರಿ ಕುಸಿತ ಕಂಡಿತ್ತು. ಇದೇ ಕಾರಣದಿಂದಾಗಿ ಈ ಮಾರ್ಗದಲ್ಲಿ ಸಂಚಾರವೂ ಸ್ಥಗಿತಗೊಳಿಸಲಾಗಿತ್ತು. ಮತ್ತೆ ಇದೇ ಪರಿಸ್ಥಿತಿ ಎದುರಾಗಿದ್ದು, ಕಳೆದ ಕೆಲ ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್ ನಲ್ಲಿ ರಸ್ತೆ ಕುಸಿತಗೊಂಡಿದೆ. ಹೀಗಾಗಿ ಮತ್ತೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯ ಸಕಲೇಶಪುರ ದೋಣಿಗಾಲ್ ಸಮೀಪದಲ್ಲಿ ಭೂ ಕುಸಿತ ಸಂಭವಿಸಿದ್ದು, ವಾಹನ ಸಂಚಾರಕ್ಕೆ ತದೆಒಡ್ಡಿದೆ, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತವು ಶಿರಾಡಿ ಘಾಟಿ ರಸ್ತೆ ಸಂಚಾರ ಮಾರ್ಗವನ್ನು ಬಂದ್ ಮಾಡಿದೆ. ಪರ್ಯಾಯ ಮಾರ್ಗವಗಿ ಚಾರ್ಮಾಡಿ ಘಾಟಿ ಮೂಲಕ ವಾಹನ ಸವಾರರು ತೆರಳುವಂತೆ ಸೂಚಿಸಿದೆ.
Advertisement. Scroll to continue reading.



































