ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಕೇಂದ್ರೀಯ ಪಠ್ಯಕ್ರಮದಲ್ಲೂ ಇಲ್ಲದ ಕೃಷಿ ಮತ್ತು ಭತ್ತದ ಕುರಿತು ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದ ಹಡಿಲು ಭೂಮಿ ಕೃಷಿ ಅಂದೋಲನ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಬ್ರಹ್ಮಾವರ ಜಿ.ಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಮುಖ್ಯಸ್ಥ ಪ್ರಕಾಶ್ ಚಂದ್ರ ಶೆಟ್ಟಿ ಹೇಳಿದರು.
ರಾಜ್ಯದಾದ್ಯಂತ ಗಮನ ಸೆಳೆದ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಭಾನುವಾರ ಹಾರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಗದ್ದೆ ಮನೆ ಬಳಿಯ ಹಡಿಲು ಭೂಮಿಯಲ್ಲಿ ಉಡುಪಿ ಮತ್ತು ಬ್ರಹ್ಮಾವರ ಪತ್ರಕರ್ತರಿಂದ ಕೃಷಿ ನಾಟಿ ಕಡೇ ನಟ್ಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರೀಯ ಪರೀಕ್ಷಾ ಪತ್ರಿಕೆಯಲ್ಲಿ ಭತ್ತದ ತೆನೆಯ ಚಿತ್ರ ನೀಡಿ ಇದು ಏನು ಎಂದು ಇರುವ ಪ್ರಶ್ನೆಗೆ ದೇಶದಾದ್ಯಂತ ಹೆಚ್ಚಿನವರು ಉತ್ತರ ನೀಡದಂತ ವಿದ್ಯಾರ್ಥಿಗಳಿಗೆ ಇದು ಸ್ಪೂರ್ತಿಯಾಗಿದೆ ಎಂದರು.

ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ನಮ್ಮ ಈ ಯೋಜನೆಗೆ ಮಾಧ್ಯಮಗಳು ಸಹಕಾರಿಯಾಗಿದ್ದವು. ಇಂದು ಮಾಧ್ಯಮದವರೇ ಬಂದು ನಾಟಿ ಮಾಡಿದ್ದು ಹೆಚ್ಚು ಬೆಂಬಲ ದೊರಕುವಂತಾಗಿದೆ ಎಂದರು.
ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪತ್ರಕರ್ತ ಕೃಷಿಕ ಅಜಿತ್ ಆರಾಡಿ ಶಾಸಕರೊಂದಿಗೆ ಭೂ ಮಾತೆಗೆ ಹಾಲನ್ನು ಅರ್ಪಿಸಿ ನೇಜಿ ನೀಡುವ ಮೂಲಕ ಯಂತ್ರ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.


ಹಾರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಉಪಾಧ್ಯಕ್ಷೆ ಜಯಂತಿ ಪೂಜಾರಿ, ಸ್ಥಳೀಯರಾದ ಎ. ಬಾಲಕೃಷ್ಣ ಶೆಟ್ಟಿ, ಅಬು ಸಾಹೇಬ್, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಸದಸ್ಯರಾದ ಬಿರ್ತಿ ರಾಜೇಶ್ ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿ ಡಾ. ಶಂಕರ್, ಟ್ರಸ್ಟ್ ಕೋಶಾಧಿಕಾರಿ ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.
ಮಹಿಳಾ ಪತ್ರಕರ್ತರು ಸೇರಿದಂತೆ 25 ಮಂದಿ 1 ಎಕ್ರೆ ಕೃಷಿಯನ್ನು ನಾಟಿ ಮಾಡಿದರು.


































