ಕೊರೊನಾ ಕಾರಣದಿಂದಾಗಿ ಈ ಬಾರಿಯ ಪಿಯು ಪರೀಕ್ಷೆಯನ್ನು ರದ್ದು ಗೊಳಿಸಲಾಗಿತ್ತು. ಎಸ್ ಎಸ್ ಎಲ್ ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ಪಿಯು ಮಂಡಳಿ ಫಲಿತಾಂಶ ಪ್ರಕಟ ಮಾಡಿದೆ.
ಕಳೆದ ತಿಂಗಳು ಜುಲೈ 20 ರಂದು ದ್ವಿತೀಯ ಪಿಯು ಫಲತಾಂಶ ಬಿಡುಗಡೆ ಮಾಡಲಾಗಿತ್ತು. ಇದಕ್ಕೂ ಮೊದಲು ಫಲಿತಾಂಶವನ್ನು ತಿರಸ್ಕರಿಸುವ ವಿದ್ಯಾರ್ಥಿಗಳಿಗೆ ಆಗಸ್ಟ್ ತಿಂಗಳಲ್ಲಿ ಮತ್ತೆ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿತ್ತು.
ಇದೀಗ ರಾಜ್ಯಾದ್ಯಂತ ಫ್ರೆಶರ್ಸ್ ಮತ್ತು ರಿಪಿಟರ್ಸ್ ಸೇರಿ 965 ವಿದ್ಯಾರ್ಥಿಗಳು ಪರೀಕ್ಷೆ ಬರೆಯೋಕೆ ನೋಂದಣಿ ಮಾಡಿಕೊಂಡಿದ್ದಾರೆ ಇವರಿಗೆ ಆಗಸ್ಟ್ 19 ರಂದು ಪಿಯುಸಿ ಪರೀಕ್ಷೆಯನ್ನು ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.
Advertisement. Scroll to continue reading.