Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

ಇಸ್ರೇಲ್ ಸೇನೆಗೆ ಮತ್ತೊಂದು ಸವಾಲು: ಗಾಜಾಪಟ್ಟಿಯಲ್ಲಿವೆ ನೂರಾರು ಕಿ.ಮೀ ಉದ್ದದ ಸುರಂಗ ಮಾರ್ಗಗಳು

0

ಟೆಲ್ ಅವೀವ್: ಗಾಜಾಪಟ್ಟಿ ಮೇಲೆ ಭೂ ಸೇನೆ ನುಗ್ಗಿಸಲು ಸಿದ್ದವಾಗಿರುವ ಇಸ್ರೇಲ್‌ಗೆ ಗಾಜಾ ಪಟ್ಟಿಯ ಜನಸಾಂದ್ರತೆ ಹಾಗೂ ಕಿರಿದಾದ ರಸ್ತೆಗಳ ಜೊತೆಯಲ್ಲೇ ಮತ್ತೊಂದು ದೊಡ್ಡ ತಲೆನೋವು ಎದುರಾಗಿದೆ. ಅದೇನೆಂದರೆ, ಗಾಜಾಪಟ್ಟಿಯಲ್ಲಿ ನಿರ್ಮಾಣವಾಗಿರುವ ಸುರಂಗ ಮಾರ್ಗಗಳು. ಈ ಸುರಂಗ ಮಾರ್ಗಗಳು ಎಲ್ಲಿ ತೆರೆದುಕೊಳ್ಳುತ್ತವೆ, ಎಲ್ಲಿ ಅಂತ್ಯಗೊಳ್ಳುತ್ತವೆ ಅನ್ನೋದ್ರ ನೀಲ ನಕ್ಷೆಯೇ ಯಾರ ಬಳಿಯೂ ಇಲ್ಲ.

ಗಾಜಾಪಟ್ಟಿ ಸುರಂಗ ಮಾರ್ಗಗಳ ದೊಡ್ಡ ನೆಟ್‌ವರ್ಕ್‌ ಹೊಂದಿದೆ. ಅತ್ಯಂತ ಚಿಕ್ಕ ಭೂ ಭಾಗವಾದ ಕಾರಣ, ಸುರಂಗ ಸಂಪರ್ಕ ವ್ಯವಸ್ಥೆಯನ್ನು ಗಾಜಾಪಟ್ಟಿ ಜನತೆ ಹೊಂದಿದ್ದರು. ಇದೀಗ ಈ ಸುರಂಗ ವ್ಯವಸ್ಥೆಯೇ ಉಗ್ರರಿಗೆ ವರದಾನವಾಗಿದೆ. ಇದು ಇಸ್ರೇಲ್ ಭೂ ಸೇನೆಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ.

2021ರಲ್ಲಿ ಇಸ್ರೇಲ್ ಭದ್ರತಾ ಪಡೆಗಳು ಈ ಕುರಿತಾಗಿ ಪರಿಶೀಲನೆ ನಡೆಸಿದ್ದವು. ಸುಮಾರು 100 ಕಿ. ಮೀ. ಮಾರ್ಗದ ಸುರಂಗ ಸಂಪರ್ಕ ವ್ಯವಸ್ಥೆಯನ್ನು ನಾಶಪಡಿಸಿದ್ದವು. ಆದರೆ, ಹಮಾಸ್ ಉಗ್ರ ಸಂಘಟನೆ ನಾಯಕ ಯಾಹ್ಯಾ ಸಿನ್‌ವಾರ್ ಪ್ರಕಾರ, ಗಾಜಾ ಪಟ್ಟಿಯಲ್ಲಿ ಸುಮಾರು 500 ಕಿ. ಮೀ. ಉದ್ದದ ಸುರಂಗ ಸಂಪರ್ಕ ವ್ಯವಸ್ಥೆ ಇದ್ದು, ಈ ಪೈಕಿ ಕೇವಲ ಶೇ. 5ರಷ್ಟು ಸುರಂಗ ಸಂಪರ್ಕವನ್ನು ಮಾತ್ರ 2021ರಲ್ಲಿ ಇಸ್ರೇಲ್ ಸೇನೆ ನಾಶ ಮಾಡಿತ್ತು ಎಂದು ಹೇಳಿಕೊಂಡಿದ್ದಾನೆ.

Advertisement. Scroll to continue reading.

2007ರ ಬಳಿಕ ಹಮಾಸ್ ಉಗ್ರ ಸಂಘಟನೆಯು ನಿರಂತರವಾಗಿ ಸುರಂಗ ಸಂಪರ್ಕ ವ್ಯವಸ್ಥೆಯನ್ನು ಹೆಚ್ಚಳ ಮಾಡುತ್ತಲೇ ಬರುತ್ತಿದೆ. ಹೀಗಾಗಿ, ಉಗ್ರ ಸಂಘಟನೆ ನಾಯಕರು ಹೇಳಿಕೊಳ್ಳುತ್ತಿರುವಂತೆ ಈ ಸುರಂಗ ಸಂಪರ್ಕ ವ್ಯವಸ್ಥೆ 500 ಕಿ. ಮೀ.ಗಿಂತಲೂ ಹೆಚ್ಚು ಇರಬಹುದಾಗಿದೆ. ಈ ಸುರಂಗಗಳು ಗಾಜಾ ಪಟ್ಟಿಯಿಂದ ಇಸ್ರೇಲ್ ಗಡಿವರೆಗೂ ವ್ಯಾಪಿಸಿರುವ ಶಂಕೆ ಇದೆ.

ಅಕ್ಟೋಬರ್ 7 ಶನಿವಾರದಂದು ಇಸ್ರೇಲ್ ಮೇಲೆ ಏಕಾಏಕಿ ಸಾವಿರಾರು ಉಗ್ರರು ದಾಳಿ ನಡೆಸೋದಕ್ಕೂ ಸುರಂಗಗಳು ನೆರವಾಗಿದ್ದವು ಎಂಬ ಮಾಹಿತಿ ಇದೆ. ಭಾರೀ ಪ್ರಮಾಣದ ರಾಕೆಟ್‌ಗಳು ಹಾಗೂ ಮದ್ದು ಗುಂಡುಗಳನ್ನು ಈ ಸುರಂಗದಿಂದಲೇ ರವಾನೆ ಮಾಡಿರುವ ಶಂಕೆ ಇದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!